ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ

N Shameed
1 Min Read

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ; ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 13 ನಿರ್ದೇಶಕರು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮದ ಅಡಿಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯಾ ಎಚ್ ಕೋಲ್ಕರ್ ತಿಳಿಸಿದ್ದಾರೆ.

ಆಯ್ಕೆಯಾದ ನೂತನ ನಿರ್ದೇಶಕರ ವಿವರ:-

ಸಾಮಾನ್ಯ ಕ್ಷೇತ್ರದಿಂದ ಅನಿತಾ ವಿ ತಾಳಿಕೋಟಿ, ಆದಪ್ಪ ನಾಲತವಾಡ, ಪಂಪಣ್ಣ ಚಿಟ್ಟಿ, ಮಲ್ಲನಗೌಡ ಓಲಿ, ರುಕುಂ ಸಿಂಗ್ ಬಪ್ಪರಗಿ, ಶೇಖರಪ್ಪ ನಾಲತವಾಡ, ಸಂತೋಷ ಕುಮಾರ ದರೋಜಿ ಆಯ್ಕೆಯಾಗಿದ್ದಾರೆ. ಶರಣಪ್ಪ ಐಲಿ ಹಿಂದುಳಿದ ವರ್ಗ (ಅ) ಹಾಗೂ ಬಸನಗೌಡ ಪೊಲೀಸ್ ಪಾಟೀಲ್‌, ಹಿಂದುಳಿದ ವರ್ಗ (ಬ) ನಾಗೇಂದ್ರ ಹುನಗುಂದ (ಪ.ಜಾತಿ), ಈಶಮ್ಮ ನಾಲತವಾಡ (ಪ.ಪಂಗಡ) ಆಯ್ಕೆಯಾಗಿದ್ದಾರೆ. ಮಹಿಳಾ ಕೊಟಾದಡಿ ಕವಿತಾ ಗುಡಸಲಿ ಹಾಗೂ ಶೋಭಾ ಶಿರವಾರ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಚುನಾವಣೆ ನಡೆದ ಸಂದರ್ಭದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ಆದನಗೌಡ ಪಾಟೀಲ, ವೆಂಕಟೇಶ ಗುಡಸಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this Article
error: Content is protected !!