ತಾವರಗೇರಾ:- ಮೊಬೈಲ್ ಸ್ಟೇಟಸ್ ಪ್ರಕರಣಕ್ಕೆ ಸ್ಪಷ್ಟನೆ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ ರಾಜಾಸಾಬ ನಾಯಕ್ ಎಂಬ ಯುವಕನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸ್ಥಳೀಯ ಯುವಕನಾದ ಶಾಮೀದ ಸಾಬ ಮೆಹೆಬೂಬ ಸಾಬ ಎಂಬ ಯುವಕನ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಆಗಮಿಸುತ್ತಿರುವದಕ್ಕೆ ಸ್ವಾಗತ ಕೋರಿ, ಸ್ಟೇಟಸ್ ಗೆ ಇಟ್ಟುಕೊಂಡಿದ್ದ ವಿಡಿಯೋ ವನ್ನು , ಆರೋಪಿ ರಾಜಾಸಾಬ ನಾಯಕ ತನ್ನ ಸ್ಟೇಟಸ್ ನಲ್ಲಿ ಪಾಕಿಸ್ತಾನ ದೇಶದ ಧ್ವಜ ಚಿತ್ರ ಹಾಕಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿ ರಾಜಾಸಾಬ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದು , ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಮೀದ್ ಸಾಬ ಮೆಹೆಬೂಬ ಸಾಬ ಎಂಬ ಯುವಕನು ಹೇಳಿಕೆ ನೀಡಿ ನಾನು ಕಾರ್ಯಕ್ರಮಕ್ಕೆ ಸಮಸ್ತ ಮುಸ್ಲಿಂ ಬಾಂಧವರು ಆಗಮಿಸಲು ಕೋರಿ ವಿಡಿಯೋ ಹಾಕಿದ್ದು ನಿಜ, ಆದರೆ ರಾಜಸಾಬ ಎಂಬ ಯುವಕನು ಮಾಡಿದ ಅಪರಾದಕ್ಕೆ ನಾನು ಹೊಣೆ ಯಲ್ಲವೆಂದು ಸ್ಪಷ್ಟನೆ ನೀಡಿದ್ದಾನೆ.

ಈ ಕುರಿತಂತೆ ಶಾಮೀದ್ ಸಾಬ ಎಂಬ ಯುವಕನನ್ನು ಪೊಲೀಸರು ವಿಚಾರಿಸಿ ಹಾಗೂ ವಿಡಿಯೋ ವನ್ನು ಪರಿಶೀಲಿಸಲಾಗಿ ಸತ್ಯಾಂಶ ಹೊರ ಬಂದಿದ್ದು , ಈತನ ವಿಡಿಯೋವನ್ನು ಬಳಸಿಕೊಂಡು ರಾಜಸಾಬ ನಾಯಕ ಎಂಬ ಯುವಕನು ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ದೇಶದ ಧ್ವಜ ದ ಚಿತ್ರದ ಜೊತೆಗೆ ಸ್ಟೇಟಸ್ ಹಾಕಿ ಸಾಮಜಿಕ ಭದ್ರತೆ ಗೆ ದಕ್ಕೆ ಉಂಟುಮಾಡಿದ್ಧಕ್ಕಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಯ ಮುಖಂಡರು ಈ ರೀತಿಯ ಘಟನೆಗಳ ಸತ್ಯಾಂಶಗಳನ್ನು, ಪರಿಶೀಲಿಸಿ ಹಾಗೂ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

Share this Article
error: Content is protected !!