15 ವರ್ಷದ ಬಾಲಕಿಯ ಬರ್ಬರ ಹತ್ಯೆ…..

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್ 
ಮಸ್ಕಿ : ಪಟ್ಟಣದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಚಾಕುವಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪಟ್ಟಣದ ಕವಿತಾಳ ರಸ್ತೆಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆ ಬಿಟ್ಟ ನಂತರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
 ಮೃತ ದುರ್ದೈವಿ  ಭೂಮಿಕಾ (15) ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ ಘಟನಾಸ್ಥಳಕ್ಕೆ ಮಸ್ಕಿ ಪೊಲೀಸ್ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!