Saturday , October 12 2024
Breaking News
Home / Breaking News / ತಾವರಗೇರಾ: ಇತಿಹಾಸ ಸೃಷ್ಟಿಸಿದ ಮತದಾನ ಬಹಿಷ್ಕಾರ..!

ತಾವರಗೇರಾ: ಇತಿಹಾಸ ಸೃಷ್ಟಿಸಿದ ಮತದಾನ ಬಹಿಷ್ಕಾರ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣೆಯಿಂದ ದೂರ ಉಳಿದ ಘಟನೆ ಇಂದು ನಡೆದ ಚುನಾವಣೆಯಲ್ಲಿ ನಡೆದಿದೆ.

ಪಟ್ಟಣದ 18ನೇ ವಾರ್ಡ್ ವ್ಯಾಪ್ತಿಯ 142ನೇ ಮತಗಟ್ಟೆಯ ವಿಠಲಾಪುರ ಗ್ರಾಮದ ಗ್ರಾಮಸ್ಥರು ಚುನಾವಣಾ ಬಹಿಷ್ಕರಿಸಿದ್ದಾರೆ, ಕಳೆದ ವಾರ ಗರ್ಭಿಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಒಗ್ಗಟ್ಟಾಗಿ ನ್ಯಾಯ ಸಿಗುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಘೋಷಿಸಿದ್ದರು, ಅದರಂತೆಯೇ ಇಂದು ಕೂಡ ಗ್ರಾಮದ ಯಾರೊಬ್ಬರೂ ಕೂಡ ಮತದಾನ ಕೇಂದ್ರಕ್ಕೆ ಆಗಮಿಸದೆ ಮತದಾನ ಬಹಿಷ್ಕಾರ ಮಾಡಿದ್ದಾರೆ,

ಸ್ಥಳಕ್ಕೆ ತಹಶಿಲ್ದಾರರಾದ ರವಿ ಅಂಗಡಿ, ಗಂಗಾವತಿ ಡಿವಾಯ ಎಸ್ ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ ಬಿಸನಹಳ್ಳಿ, ಸ್ಥಳೀಯ ಠಾಣೆಯ ಪಿಎಸ್ಐ ಸುಜಾತ ನಾಯಕ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಪಟ್ಟ ಪ್ರಯತ್ನ ವಿಫಲವಾಯಿತು.

ಗ್ರಾಮಸ್ಥರೆಲ್ಲ ಸೇರಿ ನಮಗೆ ನ್ಯಾಯ ಸಿಕ್ಕಿಲ್ಲದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟಾಗಿ ಚುನಾವಣಾ ಬಹಿಷ್ಕರಿಸಿದ್ದೇವೆ ಆದ್ದರಿಂದಾಗಿ ನಮ್ಮ ಗ್ರಾಮದ ಯಾರೊಬ್ಬರೂ ಮತದಾನ ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಿಗ್ಗೆಯಿಂದ ಚುನಾವಣೆಗೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬಿಕೋ ಎನ್ನುತ್ತಿರುವ ಮತದಾನ ಕೇಂದ್ರದಲ್ಲಿ ಕಾಲ ಕಳೆಯುವಂತಾಯಿತು. ನಂತರ ಸಂಜೆ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಬಂದ ದಾರಿಗೆ ಸುಂಕವಿಲ್ಲವಂತೆ ಎಲ್ಲಾ ಅಧಿಕಾರಿಗಳು ವಾಪಸು ತೆರಳಿದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!