ತಾವರಗೇರಾ:- ವಿಎಸ್ಎಸ್ಎನ್ ಗೆ ಆಯ್ಕೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಸ್ಥಳೀಯ ವಿಎಸ್ ಎಸ್ ಎನ್ ಗೆ ನಡೆದ ಚುನಾವಣೆ ಬಾರಿ ಕುತೂಹಲ ಕ್ಕೆ ಕಾರಣವಾಗಿದ್ದು , ರಾಜಕೀಯ ಚುನಾವಣೆಯನ್ನು ಮೀರಿಸುವಂತಿತ್ತು , ಬೆಳಿಗ್ಗೆಯಿಂದಲೇ ಮತದಾನ ಗಟ್ಟೆಯ ಮುಂದೆ ಸಾವಿರಾರು ಜನರು ನೆರೆದಿದ್ದು ಇದೇ ಪ್ರಥಮ ಬಾರಿಗೆ ವಿಎಸ್ ಎಸ್ ಎನ್ ಚುನಾವಣೆ ಬಾರಿ ರಂಗೇರಿದ್ದು ಕಂಡು ಬಂತು , ಮತದನಾಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಕುಷ್ಟಗಿಯ ಸಿಪಿಐ ಯಶವಂತ ಬೀಸನಳ್ಳಿ , ಸ್ಥಳೀಯ ಪಿಎಸ್ ಐ ನಾಗರಜ ಕೊಟಗಿ ಮತದಾನ ಕೇಂದ್ರಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಫಲಿತಾಂಶ:- ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಕಾಶ ಉಪ್ಪಳ ಆಯ್ಕೆಯಾಗಿದ್ದಾರೆ, ಅದೇ ರೀತಿ ಸಾಲಗಾರರ ಕ್ಷೇತ್ರದ ಪರಿಶಿಷ್ಟ ಜಾತಿಯಿಂದ ಸ್ಫರ್ಧಿಸಿದ್ದ ಭದ್ರಪ್ಪ ಚಲುವಾದಿ, ಪರಿಶಿಷ್ಟ ಪಂಗಡದಿಂದ ರಾಘವೇಂದ್ರ ನಾಯಕ, ಹಿಂದುಳಿದ ವರ್ಗ (ಅ) ದಿಂದ ಫಯಾಜ ಬನ್ನು, ಹಿಂದುಳಿದ ವರ್ಗ (ಬ) ಅಮರೇಶ ಕಾರಟಗಿ, ಸಾಮಾನ್ಯ ಕ್ಷೇತ್ರದಿಂದ ಗೋಪಿನಾಥ್ ರಾಯ್ಕರ್, ದೊಡ್ಡಪ್ಪ ಚಿಟ್ಟಿ, ವೀರಭದ್ರಪ್ಪ ಗುಡದೂರ, ಗುರುಮೂರ್ತಯ್ಯ ಹಿರೇಮಠ, ಅಯ್ಯಪ್ಪ ರಾಮನಗೌಡ ಓಲಿ ಆಯ್ಕೆಯಾಗಿದ್ದಾರೆ.

Share this Article
error: Content is protected !!