
ಎನ್ ಶಾಮೀದ್ ತಾವರಗೇರಾ
ತಾವರಗೇರಾ :- ಹೋಬಳಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಗೊಳ್ಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ಗ್ರಾ ಪಂ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಸದಸ್ಯರಿಗೆ ತೀರ್ಥಯಾತ್ರೆಯ ಜೊತೆಗೆ ಮೋಜುಮಾಡಲು ಗೋವಾ, ಮೈಸೂರು, ಬೆಂಗಳೂರು ಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಕೂಡ ಗ್ರಾಪಂ ತಮ್ಮ ವಶಕ್ಕೆ ಪಡೆದುಕೊಳ್ಳಲು ಹರಸಾಹಸ ನಡೆಸಿದ್ದಾರೆ. ಆದರೆ ಗ್ರಾಪಂ ಸದಸ್ಯರು ಮಾತ್ರ ಯಾರು ಹೆಚ್ಚಿಗೆ ಹಣ ನೀಡುತ್ತಾರೋ ಅವರ ಕಡೆ ಬೆಂಬಲ ಎನ್ನುತ್ತಿದ್ದಾರೆ. ಒಟ್ಟಾರೆ ಆರಿಸಿಬಂದ ಸದಸ್ಯರಿಗೆ ಪಕ್ಷ ನಿಷ್ಠೆ, ನಾಯಕರ ಪ್ರಯತ್ನ ಹಾಗೂ ಗ್ರಾಮದ ಅಭಿವೃದ್ಧಿ ಕಡೆ ಲಕ್ಷ ವಹಿಸದೇ ಸದಸ್ಯರು ತಮ್ಮ ಸ್ವಾರ್ಥವನ್ನು ನೋಡಿಕೊಳ್ಳುತ್ತಾರೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾವರಗೇರಾ  ಹೋಬಳಿಯ ಗ್ರಾಮ ಪಂಚಾಯತಿಗಳ ಮೀಸಲಾತಿಯ ವಿವರ:-
1) ಜುಮಲಾಪುರ ಅಧ್ಯಕ್ಷ ಸ್ಥಾನ ಬಿ.ಸಿ.ಎಂ.ಅ, ಉಪಾಧ್ಯಕ್ಷ ಸ್ಥಾನ ಎಸ್ ಸಿ.
2) ಮೆಣೇಧಾಳ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಎಸ್ ಟಿ.
3) ಲಿಂಗದಹಳ್ಳಿ ಅಧ್ಯಕ್ಷ ಸ್ಥಾನ ಎಸ್ ಟಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ.
4) ಸಂಗನಾಳ ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸಾಮಾನ್ಯ.
5) ಕಿಲಾರಹಟ್ಟಿ ಅಧ್ಯಕ್ಷ ಸ್ಥಾನ ಎಸ್ ಸಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ.
 
 
 
 
            